ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ (ರಾಷ್ಟ್ರೀಯ್ ಹೆದ್ದಾರಿ ೭) ಹಾಗು ಹೊರ ವರ್ತುಲ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಇದು ಒಂದು. 2000 ರ ಒಂದು ಅಧ್ಯಯನದಲ್ಲಿ ಕೆರೆಯ ಹರಡುವಿಕೆ 75 ಹೆ ಕಂಡುಬಂತು, 143 ಹೆ ತುಂಬಲು ವಿಸ್ತರಿಸುವ ಯೋಜಿಸಲಾಗಿದೆ. == ಸರೋವರ ವಿಜ್ಞಾನ == ಸರೋವರದ ಹಿನ್ನೀರಿನ ಪ್ರದೇಶವು 3750ha ಕಂಡುಬಂತು. ಮತ್ತು ಈ ಪ್ರದೇಶದಲ್ಲಿ ಯಶವಂತಪುರ, ಮತ್ತಿಕೆರೆ, ರಾಜಮಹಲ್ ವಿಲಾಸ್ ವಿಸ್ತರಣೆ, ಭರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನತ್ತು ಹಿಂದೂಸ್ತಾನ್ ಮಷೀನ್ ಟೂಲ್ಸ್ ಲಿಮಿಟೆಡ್ ವಸಾಹತುಗಳು. 1974 ರಲ್ಲಿ ಸರೋವರ ಪ್ರದೇಶದಲ್ಲಿ 77,95 ಹೆಕ್ಟೇರ್ ಇತ್ತು ಮತ್ತು 1998 ರಲ್ಲಿ ಇದು 57,75 ಹ ಇತ್ತು. == ಹರಿದು ಬರುವುದು == ಮತ್ತಿಕೆರೆ,ಯಶವಂತಪುರ,ಬಿ ಇ ಎಲ್ ,ರಾಜ್ ಮಹಲ್ ವಿಲಾಸ ದಲ್ಲಿ ಮಳೆ ಬಿದ್ದರೆ ಈ ಕೆರೆಗೆ ಹರಿದು ಬರುತ್ತದೆ. == ಜೀವಿಗಳು == ಇಲ್ಲಿ ಅನೇಕ ನೀರಿನ ಪಕ್ಷಿಗಳು ಇವೆ, ಕೆರೆಯ ಮದ್ಯದಲ್ಲಿ ದ್ವೀಪಗಳು, ಈ ಪಕ್ಷಿಗಳ ಜೀವನ ಮಾಡಲು ಸಹಕಾರಿಯಾಗಿವೆ. == ಪ್ರವಾಸ ಕೇಂದ್ರ == ಇಲ್ಲಿ ಪ್ರೇಮಿಗಳು ಹೆಚ್ಚಾಗಿ ಬರುತ್ತಾರೆ, ದೋಣಿ ವಿಹಾರ ವಿದೆ, ಮಕ್ಕಳಿಗೆ ಆಟ ಆಡಲು ಹುಲ್ಲುಗಾವಲಿದೆ.